ಮೈಸೂರು ಭಾಗದ “ಕೊತ್ತಲವಾಡಿ”ಯ ದಂಗೆಯ ಕಥೆ

 ಮೈಸೂರು ಭಾಗದ “ಕೊತ್ತಲವಾಡಿ”ಯ ದಂಗೆಯ ಕಥೆ


ನಿರ್ದೆಶಕ “ಶ್ರೀರಾಜ್” ಹಾಗು ನಿರ್ಮಾಪಕಿ “ಪುಷ್ಪಾ ಅರುಣ್ ಕುಮಾರ್” ನಿರ್ಮಾಣ ಮಾಡಿರುವ “ಕೊತ್ತಲವಾಡಿ” ಸಿನೆಮಾ, ಮೈಸೂರು ಭಾಗದ ಹಳ್ಳಿಯ ನೈಜ ಘಟನೆಯ ಆಧಾರಿತ ಚಿತ್ರವಾಗಿದೆ.

 

     “ಕೊತ್ತಲವಾಡಿ” ಸಿನೆಮಾ ಬಗ್ಗೆ

ಈ ಚಿತ್ರ ಆಗಸ್ಟ್ 1/2025ರಲ್ಲಿ ಬಿಡುಗಡೆಯಾಗಿರುವ ಐತಿಹಾಸಿಕ “ಕೊತ್ತಲವಾಡಿ” ಹಳ್ಳಿಯಲ್ಲಿ ನಡೆದ ಸಾಮಾಜಿಕ ಬದುಕಿಗಾಗಿ ದಂಗೆಯದ್ದಂತಹ ಚಿತ್ರಕಥೆ  ಹೊಂದಿದೆ.“ಕೊತ್ತಲವಾಡಿ” ಸಿನಿಮಾ ನಿರ್ಮಾಣಕ್ಕಾಗಿ ₹4 ಕೋಟಿ ವೆಚ್ಚವಾಗಿದೆ. ಈ ಸಿನಿಮಾವನ್ನು ಮೈಸೂರು ವಿಭಾಗಕ್ಕೆ ಸೇರಿರುವ, ಚಾಮರಾಜನಗರ ಜಿಲ್ಲೆಯ “ಕೊತ್ತಲವಾಡಿ” ಹಳ್ಳಿಯಲ್ಲೇ ಚಿತ್ರೀಕರಣ ನಡೆದಿದ್ದು,  ಜನರ ಬೆಂಬಲದಿಂದ ಚಿತ್ರತಂಡವು ಹಳೆಯ ಕಾಲದ ಗ್ರಾಮವನ್ನು ಸೃಷ್ಟಿಸಿ ನಿರ್ಮಾಣ ಮಾಡಲಾಗಿದೆ.


     ಕೊತ್ತಲವಾಡಿ” ಸಿನೆಮಾ ನಟನಟಿಯರ ಬಗ್ಗೆ

 ಈ ಚಿತ್ರದ ನಾಯಕನಾಗಿ “ಪೃಥ್ವಿ ಅಂಬಾರ್”ರವರು ಗಟ್ಟಿಮುಟ್ಟಾಗಿ ಖಡಕ್ ಹಳ್ಳಿ ಯುವಕ “ಮೋಹನ”ನ ಪತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ಪಾತ್ರಕ್ಕೆ ನಟಿ “ಕಾವ್ಯಾ ಶಾವ್ಯ”ರವರು ಅಭಿನಯಿಸಿದ್ದು, “ಬಾಬಣ್ಣ”ನಾಗಿ “ಗೋಪಾಲ ಕೃಷ್ಣ ದೇಶಪಾಂಡೆ ಅವರು ಎರಡು ವಿಭಿನ್ನ ಶೇಡ್ಸ್ ಗಳಲ್ಲಿ ನಟಿಸಿದ್ದಾರೆ. ಇವರೊಂದಿಗೆ “ರಾಜೇಶ್ ನಟರಂಗ” ದಕ್ಷ ಪೊಲೀಸ್ ಅಧಿಕಾರಿಯಾಗಿ,”ಬಾಲ ರಾಜವಾಡಿ” ಖಳನಾಯಕನಾಗಿ, “ಮಾನಸಿ ಸುಧೀರ್” ರಾಜಕೀಯ ಪ್ರತಿನಿಧಿಯಾಗಿ ಅಭಿನಯಿಸಿದ್ದಾರೆ.






     “ಕೊತ್ತಲವಾಡಿ” ಸಿನೆಮಾ ಕಥೆ

ಮೈಸೂರು ಭಾಗದಲ್ಲಿನ ಕೊತ್ತಲವಾಡಿ ಗ್ರಾಮದಲ್ಲಿ ನಡೆದ ದಂಗೆಯ ಬಗ್ಗೆಯ ಕಥೆಯಾಗಿದೆ. ಬರಗಾಲದ ಸಮಯದಲ್ಲಿ ಜೀವನ ಸಾಗಿಸಲು ಕಷ್ಟವಾಗಿ, ನಿರುದ್ಯೋಗದಿಂದ ಮುಕ್ತಿ ಪಡೆಯಲು ಊರಲ್ಲಿನ ಬುದ್ಧಿವಂತನಾದ ಬಾಬಣ್ಣನ ಯೋಜನೆಯ ಮೇರೆಗೆ ಒಗ್ಗಟ್ಟಾಗಿ  ಅಕ್ರಮ ಮರಳು ಗಣಿಗಾರಿಕೆ ಶುರು ಮಾಡುತ್ತಾರೆ. ಈ ಕೆಲಸದಲ್ಲಿ ಊರಿನ ಜನರು ಪೊಲೀಸರನ್ನು ಎದುರಿಸಬೇಕಾಗುತ್ತದೆ. ಬಾಬಣ್ಣನ ಅತಿಯಾಸೆಯಿಂದಾಗಿ ಪೋಲಿಸರ ನಡುವೆ ನಡೆದ ಗಲಭೆಯಲ್ಲಿ ಕೆಲವು ಜನ ಸಾವನ್ನಪ್ಪುತ್ತಾರೆ. ಇದರಿಂದ ಎತ್ತೆಚ್ಚುಕೊಳ್ಳುವ ಜನ ನ್ಯಾಯಕ್ಕಾಗಿ ಪೊಲೀಸರ ಪರ ನಿಲ್ಲುತಾರೆಯೇ?, ಇಲ್ಲವೇ ಬಾಬಣ್ಣ ಹೆಣೆದಿರುವ ಮರಳು ಮಾಫಿಯಾದಲ್ಲಿ ಬಂದಿಯಾಗುತ್ತಾರೆಯೇ? ಎನ್ನುವುದು ಸಿನೆಮಾ ನೋಡಿಯೇ ತಿಳಿಯಬೇಕಾಗುತ್ತದೆ. ಈ ಕಥೆಯು ಆಕ್ಷನ್, ರೋಮ್ಯಾಂಟಿಕ್, ಭಾವನಾತ್ಮಕ ಜೊತೆ ಸಮಾಜಿಕತೆಯಿಂದ ಕೂಡಿದ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರವಾಗಿದೆ.

 

ಇದಿಷ್ಟು “ಕೊತ್ತಲವಾಡಿ” ಸಿನಿಮಾ ಬಗ್ಗೆ ಮಾಹಿತಿಯಾಗಿದ್ದು, ಈ ಮಾಹಿತಿ ಇಷ್ಟವಾಗಿದ್ದಲ್ಲಿ ಲೈಕ್ ಮಾಡಿ, ಶೇರ್ ಮಾಡಿ. ಹಾಗೆಯೇ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ. ಧನ್ಯವಾದಗಳು.

→ A06002.

 

Comments

Popular posts from this blog

“ಡೆವಿಲ್” ಮೋಷನ್ ಪೋಸ್ಟರ್ ಜೊತೆ “ಲಕ್ಷ್ಮಿಪುತ್ರ” ಪೋಸ್ಟರ್ ರಿಲೀಸ್ ಮಾಡಿದ ಅತ್ತಿಬೆಲೆಯ "ಡಿ ಬಾಸ್"

The finals of 5th Test match between India and England Our India winning moment by 6 runs