“ಡೆವಿಲ್” ಮೋಷನ್ ಪೋಸ್ಟರ್ ಜೊತೆ “ಲಕ್ಷ್ಮಿಪುತ್ರ” ಪೋಸ್ಟರ್ ರಿಲೀಸ್ ಮಾಡಿದ ಅತ್ತಿಬೆಲೆಯ "ಡಿ ಬಾಸ್"
“ಡೆವಿಲ್” ಮೋಷನ್ ಪೋಸ್ಟರ್ ಜೊತೆ “ಲಕ್ಷ್ಮಿಪುತ್ರ” ಪೋಸ್ಟರ್ ರಿಲೀಸ್ ಮಾಡಿದ ಅತ್ತಿಬೆಲೆಯ "ಡಿ ಬಾಸ್" ಫ್ಯಾನ್ಸ್
“ಡೆವಿಲ್” ಮೋಷನ್ ಪೋಸ್ಟರ್ ಜೊತೆ “ಲಕ್ಷ್ಮಿಪುತ್ರ” ಪೋಸ್ಟರ್ ರಿಲೀಸ್ ಮಾಡಿದ ಅತ್ತಿಬೆಲೆಯ "ಡಿ ಬಾಸ್"
ಸ್ಯಾಂಡಲ್ ವುಡ್
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಡೆವಿಲ್ ಚಿತ್ರದ ಮೋಶನ್ ಪೋಸ್ಟರ್ ಜೊತೆ ನ್ಯಾಚುರಲ್ ಸ್ಟಾರ್
ಚಿಕ್ಕಣ್ಣನವರ ಲಕ್ಷ್ಮಿಪುತ್ರ ಚಿತ್ರದ ಪೋಸ್ಟರ್ ಅನ್ನು ಡಿ ಬಾಸ್ ಅಭಿಮಾನಿಗಳು ರಿವೀಲ್ ಮಾಡಿದ್ದಾರೆ.
ಈ ಬಗ್ಗೆ ನಟ ಚಿಕ್ಕಣ್ಣ ರವರು ಅಭಿಮಾನಿಗಳನ್ನ ಹೊಗಳಿದ್ದಾರೆ.
●
“ಡೆವಿಲ್” ಮೋಶನ್ ಪೋಸ್ಟರ್ ಕಾರ್ಯಕ್ರಮದಲ್ಲಿ ನಟ “ಚಿಕ್ಕಣ್ಣ”
ಭಾಗಿಯಾಗಿದ್ದರು
ಕಳೆದ ವಾರ “ಅತ್ತಿಬೆಲೆ”ಯಲ್ಲಿ
“ಡಿ ಬಾಸ್” ಅಭಿಮಾನಿಗಳಿಗಾಗಿ “ಡೆವಿಲ್” ಮೋಶನ್ ಪೋಸ್ಟರ್ ಬಿಡುಗಡೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ,
ನಟ ಚಿಕ್ಕಣ್ಣ ರವರು ಸಹ ಭಾಗಿಯಾಗಿದ್ದರು. “ಸ್ಯಾಂಡಲ್ ವುಡ್” ನ “ಬಾಕ್ಸ್ ಆಫೀಸ್ ಸುಲ್ತಾನ್” ನಟ
“ದರ್ಶನ್” ರವರ ಅಭಿನಯದ “ಕಾಟೇರ” ಸಿನಿಮಾ ನಂತರ ರಿಲೀಸ್ ಆಗಲಿರುವ ಬಹುನಿರೀಕ್ಷಿತ, ಹೈ ವೋಲ್ಟೇಜ್
ಸಿನಿಮಾ “ಡೆವಿಲ್” ಚಿತ್ರವಾಗಿದೆ. ಚಿತ್ರದ ಕೊನೆಯ
ಹಂತದ ಚಿತ್ರೀಕರಣಕ್ಕಾಗಿ “ದರ್ಶನ್”ರವರು “ಥೈಲ್ಯಾಂಡ್”ಗೆ ಹೋಗಿದ್ದ ಸಂದರ್ಭದಲ್ಲಿ, “ಡಿ ಬಾಸ್” ಅಭಿಮಾನಿಗಳ
ಮೇರೆಗೆ ಅತ್ತಿಬೆಲೆಯಲ್ಲಿ ಚಿತ್ರದ ಮೋಶನ್ ಪೋಸ್ಟರ್ ಅದ್ದೂರಿಯಾಗಿ ಬಿಡುಗಡೆ ಮಾಡಲಾಗಿತ್ತು. ಈ ಈ
ಸಂದರ್ಭದಲ್ಲಿ ನಟ ಚಿಕ್ಕಣ್ಣ ರವರು ದರ್ಶನ್ ರವರ ಗೆಳೆಯನಾಗಿ ಹಾಗೂ ಅಭಿಮಾನಿಯಾಗಿ ಕಾರ್ಯಕ್ರಮದಲ್ಲಿ
ಭಾಗವಹಿಸಿ “ಡೆವಿಲ್” ಚಿತ್ರಕ್ಕೆ ಶುಭ ಕೊರಿದ್ದಾರೆ.
●
ನಟ “ಚಿಕ್ಕಣ್ಣ”ರವರ ಸಹಕಾರಕ್ಕೆ ಗೌರವಾರ್ಥವಾಗಿ “ಲಕ್ಷ್ಮಿಪುತ್ರ”
ಪೋಸ್ಟರ್ ಹಂಚಿಕೆ
“ಡೆವಿಲ್” ಮೋಷನ್
ಪೋಸ್ಟರ್ ಬಿಡುಗಡೆಯ ಜೊತೆ ಡಿ ಬಾಸ್ ಅಭಿಮಾನಿಗಳು ಸಾಮಾಜಿಕ ಕಾರ್ಯಗಳನ್ನು ಮಾಡಿರುವುದನ್ನು ಹೊಗಳುವುದರ
ಜೊತೆ ಇದೇ ರೀತಿ ಹೆಚ್ಚು ಒಳ್ಳೆ ಕಾರ್ಯಗಳನ್ನು ಮಾಡಲು ದೇವರು ಶಕ್ತಿ ನೀಡಲಿ ಎಂದು ಕಾರ್ಯಕ್ರಮದಲ್ಲಿ
ಹೇಳಿದ್ದಾರೆ. ತಮ್ಮ ಸ್ನೇಹಿತನ ಚಿತ್ರದ ಕಾರ್ಯಕ್ರಮಕ್ಕೆ ಬಂದು ಸಹಕಾರ ನೀಡಿರುವ ಚಿಕ್ಕಣ್ಣ ರವರಿಗೆ
ಡಿ ಬಾಸ್ ಅಭಿಮಾನಿಗಳು ಗೌರವಿಸಿದ್ದಾರೆ. ಜೊತೆಗೆ ಅವರ ಅಭಿನಯದ “ಲಕ್ಷ್ಮಿಪುತ್ರ” ಚಿತ್ರದ ಪೋಸ್ಟರ್
ಅನ್ನು ರಿವೀಲ್ ಮಾಡುವುದರ ಮೂಲಕ ಚಿತ್ರಕ್ಕೆ ಶುಭ ಕೋರಿದ್ದಾರೆ.
ಇದಿಷ್ಟು ಡೆವಿಲ್
ಮೋಶನ್ ಪೋಸ್ಟರ್ ಜೊತೆ ಲಕ್ಷ್ಮಿ ಪುತ್ರ ಪೋಸ್ಟರ್ ಬಿಡುಗಡೆಯ ಬಗ್ಗೆ ಮಾಹಿತಿಯಾಗಿದ್ದು, ಮಾಹಿತಿ ನಿಮಗೆ
ಇಷ್ಟವಾಗಿದ್ದಲ್ಲಿ ಲೈಕ್ ಮಾಡಿ, ಶೇರ್ ಮಾಡಿ. ಹಾಗು ಈ ಸಿನಿಮಾ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್
ಮೂಲಕ ತಿಳಿಸಿ. ಧನ್ಯವಾದಗಳು.
→ A06002.

Comments
Post a Comment