ಕಿರುತೆರೆ ನಟಿ "ಸಂಧ್ಯಾ ಅರೆಕೆರೆ"ರವರ ಹಿನ್ನೆಲೆ ಏನು?

  ಕಿರುತೆರೆ ನಟಿ "ಸಂಧ್ಯಾ ಅರೆಕೆರೆ"ರವರ ಹಿನ್ನೆಲೆ ಏನು?


ರಾಜ್ಯದಂತ ಹೆಸರು ಮಾಡುತ್ತಿರುವ “ಸು ಫ್ರಮ್ ಸೋ” ಸಿನಿಮಾದಲ್ಲಿ, ಚಿತ್ರಕಥೆಯನ್ನೇ ಬದಲಾಯಿಸುವ “ಭಾನು” ಪಾತ್ರದಲ್ಲಿ ಅಭಿನಯಿಸಿರುವ ನಟಿ “ಸಂಧ್ಯಾ”ರವರ ಹಿನ್ನೆಲೆ ಏನು?, ಯಾವೆಲ್ಲಾ ಕನ್ನಡದ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.

 

     ●     ನಟಿ “ಸಂಧ್ಯಾ”ರವರ ಜೀವನ ಬಗ್ಗೆ

 “ಸಂಧ್ಯಾ”ರವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ, ಅರೆಕೆರೆ ಊರಿನವರು. ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡಿರುವ ಇವರು, ಅಕ್ಕನೊಂದಿಗೆ ತಾಯಿಯ ಆಶ್ರಯದಲ್ಲಿ ಬೆಳೆದಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಮುಗಿಸಿದ್ದು, ಪದವಿ ಶಿಕ್ಷಣವನ್ನು ಮೈಸೂರಿನಲ್ಲಿ ಹಾಗು ಥೀಯೇಟರ್ನಲ್ಲಿ “ಎಂ.ಎ” ಪದವಿಯನ್ನು ಬೆಂಗಳೂರಿನಲ್ಲಿ ಮುಗಿಸಿದ್ದಾರೆ. 2019 ಜೂನ್ 27ರಂದು “ಶೋಧನ್ ಬಸ್ರೂರ್” ಜೊತೆ ವೈವಾಹಿಕ ಜೀವನಕ್ಕೆ ಕಾಲಿ


ಟ್ಟಿದ್ದಾರೆ.


.     ನಟಿ “ಸಂಧ್ಯಾ”ರವರ ಜೀವನ ಬಗ್ಗೆ

 “ಸಂಧ್ಯಾ”ರವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ, ಅರೆಕೆರೆ ಊರಿನವರು. ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡಿರುವ ಇವರು, ಅಕ್ಕನೊಂದಿಗೆ ತಾಯಿಯ ಆಶ್ರಯದಲ್ಲಿ ಬೆಳೆದಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಮುಗಿಸಿದ್ದು, ಪದವಿ ಶಿಕ್ಷಣವನ್ನು ಮೈಸೂರಿನಲ್ಲಿ ಹಾಗು ಥೀಯೇಟರ್ನಲ್ಲಿ “ಎಂ.ಎ” ಪದವಿಯನ್ನು ಬೆಂಗಳೂರಿನಲ್ಲಿ ಮುಗಿಸಿದ್ದಾರೆ. 2019 ಜೂನ್ 27ರಂದು “ಶೋಧನ್ ಬಸ್ರೂರ್” ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.


     ರಂಗಭೂಮಿಯಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಹೇಗೆ?

ಮೈಸೂರಿನಲ್ಲಿ ಪದವಿ ಮುಗಿಸಿದ ನಂತರ “ನೀ. ನಾ.ಸಂ”ನಲ್ಲಿ ರಂಗ ಕಲಾವಿದೆಯಾಗಿ ಮೂರು ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಬೆಂಗಳೂರಿನಲ್ಲಿ “ಎಂ.ಎ” ಪದವಿ ಮಾಡುತ್ತಲೇ ಥೀಯೇಟರ್ ವರ್ಕ್ ಶಾಪ್ ನಲ್ಲಿ ಕೆಲಸ ಮಡುತ್ತಿರುವ ಸಮಯದಲ್ಲಿ, ಅವರ ಗುರುಗಳಾದ “ಚೆನ್ನಕೇಶವ”ರವರು “ಸುಳಿ” ಚಿತ್ರದಲ್ಲಿ ಅಭಿನಯಿಸಲು ಅವಕಾಶ ನೀಡುತ್ತಾರೆ. ಮೂಲತಃ ರಂಗಭೂಮಿ ಕಲಾವಿದೆಯಾಗಿ ನಟಿಸಿದ್ದು, ಪಿ.ಹೆಚ್. ವಿಶ್ವನಾಥ್ ನಿರ್ದೇಶನದ, ನಟ ಶ್ರೀನಾಥ್ ರವರ ಅಭಿನಯದ “ಸುಳಿ” ಚಿತ್ರದಲ್ಲಿ “ನಿಂಗಮ್ಮ” ಎಂಬ ಚಿಕ್ಕ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಾರೆ.

 

     ನಟಿ “ಸಂಧ್ಯಾ”ರವರು ಅಭಿನಯಿಸಿರುವ ಕನ್ನಡ ಚಿತ್ರಗಳು.

 2025ರಲ್ಲಿ  ಸು ಫ್ರಮ್ ಸೋ,

 2024ರಲ್ಲಿ ಪೆಪೆ, ಭೀಮಸೇನ ನಳಮಹಾರಾಜ, ಕಂಬ್ಳಿ ಹುಳ,

2023ರಲ್ಲಿ ಸ್ವಾತಿ ಮುತ್ತಿನ ಮಳೆ ಹನಿಯೇ, ಫೋಟೊ,

2018ರಲ್ಲಿ ಒಂದಲ್ಲಾ ಎರಡಲ್ಲಾ, ಸುಳಿ

 

 ಇದಿಷ್ಟು ನಟಿ "ಸಂಧ್ಯಾ ಅರೆಕೆರೆ"ರವರ ಬಗ್ಗೆ ಮಾಹಿತಿಯಾಗಿದ್ದು, ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಲೈಕ್ ಮಾಡಿ, ಶೇರ್ ಮಾಡಿ. ಹಾಗೆಯೇ ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ. ಧನ್ಯವಾದಗಳು.

→ A06002.





Comments

Popular posts from this blog

“ಡೆವಿಲ್” ಮೋಷನ್ ಪೋಸ್ಟರ್ ಜೊತೆ “ಲಕ್ಷ್ಮಿಪುತ್ರ” ಪೋಸ್ಟರ್ ರಿಲೀಸ್ ಮಾಡಿದ ಅತ್ತಿಬೆಲೆಯ "ಡಿ ಬಾಸ್"

The finals of 5th Test match between India and England Our India winning moment by 6 runs

ಮೈಸೂರು ಭಾಗದ “ಕೊತ್ತಲವಾಡಿ”ಯ ದಂಗೆಯ ಕಥೆ