ಮೈಸೂರು ಭಾಗದ “ಕೊತ್ತಲವಾಡಿ”ಯ ದಂಗೆಯ ಕಥೆ ನಿರ್ದೆಶಕ “ಶ್ರೀರಾಜ್” ಹಾಗು ನಿರ್ಮಾಪಕಿ “ಪುಷ್ಪಾ ಅರುಣ್ ಕುಮಾರ್” ನಿರ್ಮಾಣ ಮಾಡಿರುವ “ಕೊತ್ತಲವಾಡಿ” ಸಿನೆಮಾ, ಮೈಸೂರು ಭಾಗದ ಹಳ್ಳಿಯ ನೈಜ ಘಟನೆಯ ಆಧಾರಿತ ಚಿತ್ರವಾಗಿದೆ. ● “ಕೊತ್ತಲವಾಡಿ” ಸಿನೆಮಾ ಬಗ್ಗೆ ಈ ಚಿತ್ರ ಆಗಸ್ಟ್ 1/2025ರಲ್ಲಿ ಬಿಡುಗಡೆಯಾಗಿರುವ ಐತಿಹಾಸಿಕ “ಕೊತ್ತಲವಾಡಿ” ಹಳ್ಳಿಯಲ್ಲಿ ನಡೆದ ಸಾಮಾಜಿಕ ಬದುಕಿಗಾಗಿ ದಂಗೆಯದ್ದಂತಹ ಚಿತ್ರಕಥೆ ಹೊಂದಿದೆ.“ಕೊತ್ತಲವಾಡಿ” ಸಿನಿಮಾ ನಿರ್ಮಾಣಕ್ಕಾಗಿ ₹4 ಕೋಟಿ ವೆಚ್ಚವಾಗಿದೆ. ಈ ಸಿನಿಮಾವನ್ನು ಮೈಸೂರು ವಿಭಾಗಕ್ಕೆ ಸೇರಿರುವ, ಚಾಮರಾಜನಗರ ಜಿಲ್ಲೆಯ “ಕೊತ್ತಲವಾಡಿ” ಹಳ್ಳಿಯಲ್ಲೇ ಚಿತ್ರೀಕರಣ ನಡೆದಿದ್ದು, ಜನರ ಬೆಂಬಲದಿಂದ ಚಿತ್ರತಂಡವು ಹಳೆಯ ಕಾಲದ ಗ್ರಾಮವನ್ನು ಸೃಷ್ಟಿಸಿ ನಿರ್ಮಾಣ ಮಾಡಲಾಗಿದೆ. ● ಕೊತ್ತಲವಾಡಿ” ಸಿನೆಮಾ ನಟನಟಿಯರ ಬಗ್ಗೆ ಈ ಚಿತ್ರದ ನಾಯಕನಾಗಿ “ಪೃಥ್ವಿ ಅಂಬಾರ್”ರವರು ಗಟ್ಟಿಮುಟ್ಟಾಗಿ ಖಡಕ್ ಹಳ್ಳಿ ಯುವಕ “ಮೋಹನ”ನ ಪತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ಪಾತ್ರಕ್ಕೆ ನಟಿ “ಕಾವ್ಯಾ ಶಾವ್ಯ”ರವರು ಅಭಿನಯಿಸಿದ್ದು, “ಬಾಬಣ್ಣ”ನಾಗಿ “ಗೋಪಾಲ ಕೃಷ್ಣ ದೇಶಪಾಂಡೆ ಅವರು ಎರಡು ವಿಭಿನ್ನ ಶೇಡ್ಸ್ ಗಳಲ್ಲಿ ನಟಿಸಿದ್ದಾರೆ. ಇವರೊಂದಿಗೆ “ರಾಜೇಶ್ ನಟರಂಗ” ದಕ್ಷ ಪೊಲೀಸ್ ಅಧಿಕಾರಿಯಾಗಿ,”ಬಾಲ ರಾಜವಾಡಿ” ಖಳನಾಯಕನಾಗಿ,...